ಗೋಕಾಕ: ಗೋಕಾಕ್ ತಾಲೂಕಿನ ಹುಣಶ್ಯಾಳ ಗ್ರಾಮದ ವಿದ್ಯಾರ್ಥಿನಿ ಕುಮಾರಿ ಸೌಮ್ಯಾ ಈರಯ್ಯ ಹಿರೇಮಠ ಎಸ್ಸೆಸೆಲ್ಸಿ ಯಲ್ಲಿ 625 ಕ್ಕೆ 617 ಅಂಕ ಪಡೆದು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.
ಹುಣಶ್ಯಾಳನ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ರಾಷ್ಟ್ರೋತ್ಥಾನ ಪಬ್ಲಿಕ್ ಸ್ಕೂಲ್ ಹುಣಶ್ಯಾಳ ಸಹಯೋಗದಲ್ಲಿ ಶಾಲೆಯ ಮುಖ್ಯಸ್ಥರು ಹಾಗೂ ಹಿರಿಯರು ವಿದ್ಯಾರ್ಥಿನಿಯನ್ನು ಸತ್ಕರಿಸಿ ಶುಭಹಾರೈಸಿದರು.
ಇದೆ ಸಂದರ್ಭ ಮೂಡಲಗಿ ವಲಯ ಶಿಕ್ಷಣ ಅಧಿಕಾರಿ ಅಜಿತ್ ಮೆನ್ನಿಕೇರಿ ತಮ್ಮ ಕಚೇರಿಗೆ ವಿದ್ಯಾರ್ಥಿಯನ್ನು ಕರೆಸಿ ಶುಭ ಕೋರಿದರು.