ಗೋಕಾಕ ಗ್ರಾಮದೇವತೆಯರ ಜಾತ್ರೆ

7 Min Read

ಗೋಕಾಕ : 5 ವರ್ಷಗಳಿಗೊಮ್ಮೆ ಆಚರಿಸಲಾಗುವ ಗೋಕಾಕ ಗ್ರಾಮದೇವತೆಯರ ಜಾತ್ರೆ ಈ ಬಾರಿ ಹತ್ತು ವರ್ಷಗಳ ನಂತರ ನಡೆಯುತ್ತಿದೆ. ಜೂ.30ರಿಂದ ಜುಲೈ 8ರವರೆಗೆ ಜಾತ್ರೆ ನಡೆಯಲಿದ್ದು, ಗೋಕಾಕ ಜನತೆ ಸಡಗರ, ಸಂಭ್ರಮದಿಂದ ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಜೂ. 30 ರಂದು ದೇವಿ ಪ್ರತಿಷ್ಠಾಪನೆ ಜಾತ್ರೆಯ ಮೊದಲನೆಯ ದಿನವಾದ ಜೂ.30ರಂದು ದೇವಿಯರನ್ನು ಜಿನಗಾರರ ಮನೆಯಿಂದ ಸಂಜೆ 4 ಗಂಟೆಗೆ ಕರೆತಂದು ಅಂಬಿಗೇರ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗುವುದು.

ಜು.1 ರಂದು ಮಹಾಲಕ್ಷ್ಮೇ ದೇವಿಯರಿಗೆ ಅಭಿಷೇಕ ಹಾಗೂ ಪೂಜೆ ಸಲ್ಲಿಸುವುದು, ಮಧ್ಯಾಹ್ನ ಪುರಜನರಿಂದ ನೈವೇದ್ಯ ಅರ್ಪಿಸಲಾಗುವುದು. ರಾತ್ರಿ ಮದ್ದು ಹಾರಿಸುವುದು ಮತ್ತು ದೇವಿಯರ ಹೊನ್ನಾಟ ನಡೆಯಲಿದೆ. ಜು.2ರಂದು ಬೆಳಗ್ಗೆ 7 ಗಂಟೆಗೆ ಗ್ರಾಮದೇವಿಯರನ್ನು ರಥದಲ್ಲಿಕೂಡ್ರಿಸುವುದು. ಮಧ್ಯಾಹ್ನ 2 ಗಂಟೆಗೆ ಸೋಮವಾರ ಪೇಟೆಯಿಂದ ಎರಡು ರಥಗಳ ಉತ್ಸವ ಸಕಲ ವಾದ್ಯ ಮೇಳದೊಂದಿಗೆ ನಡೆದು ಸಂಜೆ 6 ಗಂಟೆಗೆ ದ್ಯಾಮವ್ವ ಗುಡಿಗೆ ತಲುಪುವುದು. ರಾತ್ರಿ ಬಯಲಾಟ ಪ್ರದರ್ಶನ, ಮದ್ದು ಹಾರಿಸುವ ಕಾರ್ಯಕ್ರಮ ಜರುಗಲಿದೆ.

*ರಮೇಶ ಜಾರಕಿಹೊಳಿ, ಶಾಸಕರು ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷರು ಶಿವಪರಮಾತ್ಮ ಡೊಳ್ಳಾಸುರನನ್ನ ಸಂಹರಿಸಿ ಅವನ ಮೈಯ ಚರ್ಮದಿಂದ ಡೊಳ್ಳನ್ನು ತಯಾರಿಸಿ ಕುರುಬರಿಗೆ ವಾದ್ಯವಾಗಿ ಕೊಟ್ಟನೆಂದು ಪ್ರತೀತಿ ಇದೆ. ಹೌದು. ಡೊಳ್ಳಿನ ನಾದವೂ ಕೇಳುಗರ ಎದೆಯಲ್ಲಿ ಕಂಪನವನ್ನುಂಟುಮಾಡುತ್ತದೆ. ಎಲ್ಲಾ ಪಲ್ಲಕ್ಕಿಗಳು ಕೆಳಗಿನ ಪೇಟೆಯ ಲಕ್ಕವ್ವನ ಗುಡಿಯಲ್ಲಿ ಆಸೀನವಾಗುತ್ತಿದ್ದಂತೆ, ಇತ್ತ ಅಂಬಿಗೇರ ಓಣಿಯಲ್ಲಿ ದೇವಿಯ ಹೊನ್ನಾಟದ ಸಿದ್ಧತೆಗಳು ಪ್ರಾರಂಭಗೊಳ್ಳುತ್ತದೆ. ಬೆಳಗಿನಿಂದಲೂ ದರ್ಶನ ಪಡೆಯುತ್ತಿರುವ ಜನದಟ್ಟಣೆ ರಾತ್ರಿಯಾದರೂ ಕರಗದಿದ್ದಾಗ, ಕೊನೆಗೆ ರಾಣಿ ಜ್ಞಾನ ಬಾರಕೋಲು ಬೀಸಲು ಪ್ರಾರಂಭಿಸಿದಾಗ, ಭಕ್ತರು ಪಕ್ಕಕ್ಕೆ ಸರಿದು ಮುಂದಿನ ಕಾರ್ಯಕ್ಕೆ ಅನುವು ಮಾಡಿಕೊಟ್ಟರು. ಅಷ್ಟೊತ್ತಿಗೆ ದೇವಿಯ ಭಕ್ತರು ಅಲ್ಲಿಗೆ ಆಗಮಿಸಿ ದೇವಿಯನ್ನು ಹೊನ್ನಾಟಕ್ಕೆ ಒಯ್ಯಲು ಅಣಿಯಾಗುತ್ತಾರೆ. ಹೊನ್ನಾಟಕ್ಕೆ ಒಂದು ಪೌರಾಣಿಕ ಕಥೆ ಈ ಹೊನ್ನಾಟಕ್ಕೆ ಒಂದು ಪೌರಾಣಿಕ ಕಥೆ ಇದೆ. ಅದೇನೆಂದರೆ, ಬ್ರಾಹ್ಮಣರ ಮನೆತನದಲ್ಲಿ ಜನಿಸಿದ ಲಕ್ಷ್ಮೀ ದೇವಿಯು ಬ್ರಹ್ಮಲಿಖಿತದಂತೆ ರಾಣಿ ಜ್ಞಾನ ಪಾಂಡಿತ್ಯ ಮತ್ತು ಸೌಂದರ್ಯಕ್ಕೆ ಮನಸೋತು ವಿವಾಹವಾಗುತ್ತಾಳೆ. ಅವರಿಬ್ಬರ ಸುಂದರಮಯ ಜೀವನಕ್ಕೆ ಸಾಕ್ಷಿ ಎನ್ನುವಂತೆ ಮುದ್ದಾದ ಇಂಗಳೋಬ, ಶಿಂಗಳೋಬ ಎಂಬ ಎರಡು ಮಕ್ಕಳ ಜನನವಾಗುತ್ತದೆ. ಹೀಗೆ ಅವರಿಬ್ಬರ ಸಂಸಾರದ ರಥ ಸಾಗುತ್ತಿರಲು, ಒಂದು ದಿನ ಅವರ ಮಕ್ಕಳು ತಂದೆಯ ಅಂಗಡಿಗೆ ತೆರಳಿರುತ್ತಾರೆ. ಮರಳಿ ಬಂದಾಗ ಅವರ ಜೇಬಿನಲ್ಲಿ ಚರ್ಮದ ತುಣುಕು ಇರುವುದನ್ನು ಗಮನಿಸಿ ದೇವಿ ಅದರ ಬಗ್ಗೆ ವಿಚಾರಿಸುತ್ತಾಳೆ.

ಆಗ ತನ್ನ ಗಂಡ ರಾಣಿ ಜ್ಞಾನ ಸಮಗಾರ ವೃತ್ತಿ ನಡೆಸುತ್ತಾನೆ ಎಂದು ಅರಿವಾದಾಗ, ಅವನ ಮೇಲೆ ಮುನಿಸಿಕೊಂಡು ತವರು ಮನೆಗೆ ತೆರಳುತ್ತಾಳೆ. ಅವಳ ಗಂಡ ರಾಣಿ ಜ್ಞಾನ ಅವಳನ್ನು ಕರೆಯಲು ಬರುತ್ತಾನೆ. ಬಾರದೆ ಇದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ. ಆಗ ದೇವಿ ದ್ಯಾಮವ್ವಳ ರುದ್ರಾವತಾರ ತಾಳಿ, ಭಕ್ತರ ಹೆಗಲೇರುತ್ತಾಳೆ. ಇವರ ಸಂಸಾರ ವಿರಸಕ್ಕೆ ಮಕ್ಕಳಾದ ಇಂಗಳೋಬ ಶಿಂಗಳೋಬ ಕಾರಣವೆಂದು ಭಾವಿಸಿದ ಸಮಗಾರ ಸಮುದಾಯದವರು ಅವರನ್ನು ಸುಡಲು ಪ್ರಾರಂಭಿಸುತ್ತಾರೆ. ಈ ಸನ್ನಿವೇಶವೇ ಹೊನ್ನಾಟವಾಗಿದೆ. ಕಡುಕೆಂಪು ಬಣ್ಣದಿಂದ ಅಲಂಕೃತ ದೇವಿಯ ಮುಖ ಸಿಟ್ಟಿನಿಂದ ಕುದಿಯಲು ಪ್ರಾರಂಭಿಸುತ್ತದೆ. ಭಕ್ತರ ಜಯಘೋಷಗಳು ಮುಗಿಲೆತ್ತರಕ್ಕೆ ಏರುತ್ತವೆ.

ದೇವಿಯ ಹೊನ್ನಾಟದಲ್ಲಿ ಊರಿನ ಎಲ್ಲಾ ಜನರು ಭಾಗವಹಿಸುತ್ತಾರೆ. ಸಾಂಪ್ರದಾಯದಂತೆ ಮರಾಠಾ ಗಲ್ಲಿಯ ಯುವಕರು ದೇವಿಯರನ್ನು ಹೊನ್ನಾಟದಲ್ಲಿ ಕೊಂಡೊಯ್ಯುತ್ತಾರೆ. ಎರಡು ದೇವಿಯರನ್ನು ಬೆಳಗಿನವರೆಗೆ ಆಡಿಸುವ ಯುವಕರು ದಣಿವರಿಯದ ಉತ್ಸಾಹಿಗಳು. ಶಿವಶರಣ ಹರಳಯ್ಯ ಸಮಾಜದವರು ದೇವಿಯ ಮಕ್ಕಳಾದ ಇಂಗಳೋಬ ಶಿಂಗಳೋಬರನ್ನ ಸುಡುವ ಪ್ರಯತ್ನ ಮಾಡುತ್ತಾರೆ. ಈ ಸಂದರ್ಭದಲ್ಲಿ ಬಳಸುವ ವಿಶಿಷ್ಟ ಶಹನಾಯಿ ಮತ್ತು ಹಲಗೆ ನಾದ, ಹೊನ್ನಾಟ ನೋಡಲು ಬಂದ ಲಕ್ಷಾಂತರ ಭಕ್ತರನ್ನು ವಿಭಿನ್ನ ಲೋಕಕ್ಕೆ ಕೊಂಡೊಯ್ಯುತ್ತದೆ. ಶಕ್ತಿ ದೇವತೆ ದ್ಯಾಮವ್ವ ಚಂಡಿ ಚಾಮುಂಡಿಯ ಅವತಾರ ತಾಳಿ ಭಕ್ತರ ಮೂಲಕ ಇಡೀ ರಸ್ತೆಯ ತುಂಬಾ ಓಡಾಡಲು ಆರಂಭಿಸುತ್ತಾಳೆ. ಸಂಪ್ರದಾಯದಂತೆ ದೇವಿಗೆ ಮೊದಲಿಗೆ ಅಂಬಿಗೇರ ಗಲ್ಲಿಯಲ್ಲಿ ನಿಪ್ಪಾಣಿ ಕುಟುಂಬದವರ ಮನೆಯಲ್ಲಿ ದೇವಿಯರಿಗೆ ಉಡಿ ತುಂಬಲಾಗುತ್ತದೆ.

ದೇವಿಯರಿಗೆ ಹೂಗಳನ್ನು ಚೆಲ್ಲಿ ಆರತಿಗಳಿಂದ ಸ್ವಾಗತಿಸುವ ಜನ ಲಕ್ಷ್ಮಿ ನಾಮಸ್ಮರಣೆ ಮಾಡುತ್ತಾ ಇಬ್ಬದಿಯಲ್ಲೂ ನಿಂತಿರುತ್ತಾರೆ. ಅಲ್ಲಿ ಮಂತ್ರೋಚ್ಛಾರಗಳಿಂದ ದೇವಿಯರನ್ನು ಶಾಂತಗೊಳಿಸಿ, ದೇಶಪಾಂಡೆ ಕುಟುಂಬದ ವತಿಯಿಂದ ಸೀರೆ ಕುಪ್ಪಸ, ಬಳೆ ತೊಡಿಸಿ, ಹೂ ಹಾರ ಹಾಕಿ, ಪವಿತ್ರ ಸಾಧನಗಳಾದ ಅರಿಶಿನ, ಉತ್ತತ್ತಿ, ಕೊಬ್ಬರಿ, ಹಣ್ಣು, ವೀಳ್ಯದೆಲೆಗಳಿಂದ ಉಡಿ ತುಂಬಿ, ದೇವಿಗೆ ಅತ್ಯಂತ ಪ್ರಿಯವಾದ ಸುವಾಸನೆಯುಕ್ತ ಮಲ್ಲಿಗೆ ಹಾರದಿಂದ ಅಲಂಕರಿಸಿ, ಅವಳನ್ನು ತೃಪ್ತಿಪಡಿಸಲಾಗುತ್ತದೆ. ನಂತರ ಅಲ್ಲಿಂದ ಹೊರ ತೆರಳುವ ದೇವಿಯ ಹೊನ್ನಾಟ ಮತ್ತೆ ಮುಂದುವರೆಯುತ್ತದೆ.ಇಷ್ಟೊತ್ತಿಗಾಗಲೇ ಚುಮುಚುಮು ಬೆಳಕು ಹರಿಯಲು ಪ್ರಾರಂಭಿಸುತ್ತಿದ್ದಂತೆ ಭಕ್ತರ ಸಂಖ್ಯೆ ಹೆಚ್ಚುತ್ತಾ ಇಡೀ ರಸ್ತೆ ಭಕ್ತರಿಂದ ಗಿಜಿಗುಡಲು ಪ್ರಾರಂಭಿಸುತ್ತದೆ. ಆಗ ಅವರನ್ನು ಬದಿಗೆ ಸರಿಸಲು ಪೊಲೀಸರಿಂದಲೂ ಸಾಧ್ಯವಾಗದೆ ಇದ್ದಾಗ, ರಾಣಿ ಜ್ಞಾನ ಬಾರಕೋಲು ನೆರವಾಗುತ್ತದೆ. ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ತೆರಳಿ, ಮರಳುವ ದೇವಿಯ ರಾತ್ರಿಯ ರೌದ್ರಾವತಾರ ಕಳೆದು ಸೌಮ್ಯಳಾಗಿರುತ್ತಾಳೆ. ಮಂದಗತಿಯಲ್ಲಿ ಓಡಾಡುತ್ತಾ, ಜಾತ್ರಾ ಕಮಿಟಿಯ ಹಿರಿಯ ಸದಸ್ಯರಾದ ಚವ್ಹಾಣರ ಮನೆಗೆ ಆಗಮಿಸುವಳು. ಅವಳನ್ನು ಅದ್ದೂರಿಯಿಂದ ಸ್ವಾಗತಿಸಿಕೊಳ್ಳುವ ಅವರು ಹಾಗೂ ಆ ಓಣಿಯ ಜನ ದೇವಿಗೆ ಉಡಿ ತುಂಬಿ, ಹೂ ಹಾರ ಸಮರ್ಪಿಸಿ ಧನ್ಯತಾ ಭಾವ ಮೆರೆಯುವರು. ಸುಮಂಗಲಿಯರೆಲ್ಲಾ ದೇವಿಗೆ ಆರತಿ ಬೆಳಗಿ, ಹರಸು ತಾಯಿಯೇ ಎಂದು ಕೋರುವರು.

 ಬಯಲಾಟ, ಸಿಡಿಮದ್ದು ಪ್ರದರ್ಶನ: ಜು.3ರಂದು ಮಧ್ಯಾಹ್ನ ದೇವಿಯರ ಎರಡು ರಥಗಳು ಹಳೆಯ ಮುನ್ಸಿಪಾಲ್ಟಿ ಮತ್ತು ಚಾವಡಿ ರಸ್ತೆಯಿಂದ ಹಾಯ್ದು ಮೊದಲ ರಥ ಅಜಂತಾ ಕೂಟಗೆ, ಎರಡನೇ ರಥ ಬಾಫನಾ ಕೂಟಗೆ ತಲುಪಲಿದೆ. ರಾತ್ರಿ ಬಯಲಾಟ, ಮದ್ದು ಹಾರಿಸುವುದು ನಡೆಯಲಿದೆ. ಜು.4ರಂದು ಬೆಳಗ್ಗೆ 8ಗಂಟೆಗೆ ಅಜಂತಾ ಕೂಟದಿಂದ ಮೊದಲ ರಥ ಹೊರಟು ಮೆರಕನಟ್ಟಿ ಶ್ರೀ ಮಹಾಲಕ್ಷಿತ್ರ್ಮೕ ದೇವಿ ದೇವಸ್ಥಾನ ತಲುಪುವುದು. ಮಧ್ಯಾಹ್ನ 3 ಗಂಟೆಗೆ ಎರಡನೇ ರಥ ಬಾಫನಾ ಕೂಟದಿಂದ ಸಂಜೆ 6 ಗಂಟೆಗೆ ಗುರುವಾರ ಪೇಟೆಯ ಶ್ರೀ ಮಹಾಲಕ್ಷಿತ್ರ್ಮೕ ದೇವಿ ದೇವಸ್ಥಾನ ತಲುಪಲಿದೆ. ರಾತ್ರಿ ಬಯಲಾಟ, ಮದ್ದು ಹಾರಿಸುವ ಕಾರ್ಯಕ್ರಮ ನಡೆಯಲಿದೆ. ಸಾಂಪ್ರದಾಯದಂತೆ ಮರಾಠಾ ಗಲ್ಲಿಯ ಯುವಕರು ದೇವಿಯರನ್ನು ಹೊನ್ನಾಟದಲ್ಲಿ ಕೊಂಡೊಯ್ಯುತ್ತಾರೆ. ಎರಡು ದೇವಿಯರನ್ನು ಬೆಳಗಿನವರೆಗೆ ಆಡಿಸುವ ಯುವಕರು ದಣಿವರಿಯದ ಉತ್ಸಾಹಿಗಳು. ಶಿವಶರಣ ಹರಳಯ್ಯ ಸಮಾಜದವರು ದೇವಿಯ ಮಕ್ಕಳಾದ ಇಂಗಳೋಬ ಶಿಂಗಳೋಬರನ್ನ ಸುಡುವ ಪ್ರಯತ್ನ ಮಾಡುತ್ತಾರೆ. ಈ ಸಂದರ್ಭದಲ್ಲಿ ಬಳಸುವ ವಿಶಿಷ್ಟ ಶಹನಾಯಿ ಮತ್ತು ಹಲಗೆ ನಾದ, ಹೊನ್ನಾಟ ನೋಡಲು ಬಂದ ಲಕ್ಷಾಂತರ ಭಕ್ತರನ್ನು ವಿಭಿನ್ನ ಲೋಕಕ್ಕೆ ಕೊಂಡೊಯ್ಯುತ್ತದೆ. ಶಕ್ತಿ ದೇವತೆ ದ್ಯಾಮವ್ವ ಚಂಡಿ ಚಾಮುಂಡಿಯ ಅವತಾರ ತಾಳಿ ಭಕ್ತರ ಮೂಲಕ ಇಡೀ ರಸ್ತೆಯ ತುಂಬಾ ಓಡಾಡಲು ಆರಂಭಿಸುತ್ತಾಳೆ.

ಸಂಪ್ರದಾಯದಂತೆ ದೇವಿಗೆ ಮೊದಲಿಗೆ ಅಂಬಿಗೇರ ಗಲ್ಲಿಯಲ್ಲಿ ನಿಪ್ಪಾಣಿ ಕುಟುಂಬದವರ ಮನೆಯಲ್ಲಿ ದೇವಿಯರಿಗೆ ಉಡಿ ತುಂಬಲಾಗುತ್ತದೆ. ದೇವಿಯರಿಗೆ ಹೂಗಳನ್ನು ಚೆಲ್ಲಿ ಆರತಿಗಳಿಂದ ಸ್ವಾಗತಿಸುವ ಜನ ಲಕ್ಷ್ಮಿ ನಾಮಸ್ಮರಣೆ ಮಾಡುತ್ತಾ ಇಬ್ಬದಿಯಲ್ಲೂ ನಿಂತಿರುತ್ತಾರೆ. ಅಲ್ಲಿ ಮಂತ್ರೋಚ್ಛಾರಗಳಿಂದ ದೇವಿಯರನ್ನು ಶಾಂತಗೊಳಿಸಿ, ದೇಶಪಾಂಡೆ ಕುಟುಂಬದ ವತಿಯಿಂದ ಸೀರೆ ಕುಪ್ಪಸ, ಬಳೆ ತೊಡಿಸಿ, ಹೂ ಹಾರ ಹಾಕಿ, ಪವಿತ್ರ ಸಾಧನಗಳಾದ ಅರಿಶಿನ, ಉತ್ತತ್ತಿ, ಕೊಬ್ಬರಿ, ಹಣ್ಣು, ವೀಳ್ಯದೆಲೆಗಳಿಂದ ಉಡಿ ತುಂಬಿ, ದೇವಿಗೆ ಅತ್ಯಂತ ಪ್ರಿಯವಾದ ಸುವಾಸನೆಯುಕ್ತ ಮಲ್ಲಿಗೆ ಹಾರದಿಂದ ಅಲಂಕರಿಸಿ, ಅವಳನ್ನು ತೃಪ್ತಿಪಡಿಸಲಾಗುತ್ತದೆ. ನಂತರ ಅಲ್ಲಿಂದ ಹೊರ ತೆರಳುವ ದೇವಿಯ ಹೊನ್ನಾಟ ಮತ್ತೆ ಮುಂದುವರೆಯುತ್ತದೆ.ಇಷ್ಟೊತ್ತಿಗಾಗಲೇ ಚುಮುಚುಮು ಬೆಳಕು ಹರಿಯಲು ಪ್ರಾರಂಭಿಸುತ್ತಿದ್ದಂತೆ ಭಕ್ತರ ಸಂಖ್ಯೆ ಹೆಚ್ಚುತ್ತಾ ಇಡೀ ರಸ್ತೆ ಭಕ್ತರಿಂದ ಗಿಜಿಗುಡಲು ಪ್ರಾರಂಭಿಸುತ್ತದೆ.

ಆಗ ಅವರನ್ನು ಬದಿಗೆ ಸರಿಸಲು ಪೊಲೀಸರಿಂದಲೂ ಸಾಧ್ಯವಾಗದೆ ಇದ್ದಾಗ, ರಾಣಿ ಜ್ಞಾನ ಬಾರಕೋಲು ನೆರವಾಗುತ್ತದೆ. ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ತೆರಳಿ, ಮರಳುವ ದೇವಿಯ ರಾತ್ರಿಯ ರೌದ್ರಾವತಾರ ಕಳೆದು ಸೌಮ್ಯಳಾಗಿರುತ್ತಾಳೆ. ಮಂದಗತಿಯಲ್ಲಿ ಓಡಾಡುತ್ತಾ, ಜಾತ್ರಾ ಕಮಿಟಿಯ ಹಿರಿಯ ಸದಸ್ಯರಾದ ಚವ್ಹಾಣರ ಮನೆಗೆ ಆಗಮಿಸುವಳು. ಅವಳನ್ನು ಅದ್ದೂರಿಯಿಂದ ಸ್ವಾಗತಿಸಿಕೊಳ್ಳುವ ಅವರು ಹಾಗೂ ಆ ಓಣಿಯ ಜನ ದೇವಿಗೆ ಉಡಿ ತುಂಬಿ, ಹೂ ಹಾರ ಸಮರ್ಪಿಸಿ ಧನ್ಯತಾ ಭಾವ ಮೆರೆಯುವರು. ಸುಮಂಗಲಿಯರೆಲ್ಲಾ ದೇವಿಗೆ ಆರತಿ ಬೆಳಗಿ, ಹರಸು ತಾಯಿಯೇ ಎಂದು ಕೋರುವರು. ಹಲಗೆ, ತುತ್ತೂರಿಗಳ ನಾದಕ್ಕೆ ಮನಸೋತ ಜನ, ಹಿರಿಯ, ಕಿರಿಯ ಎಂಬ ಭೇದ ಭಾವವಿಲ್ಲದೆ ನರ್ತಿಸುವರು.

ಹೀಗಾಗಿ ಜಾತ್ರೆಯ ವೈಶಿಷ್ಟ್ಯವೆಂದರೆ ಅದು ದೇವಿಯ ಹೊನ್ನಾಟ. ಭಕ್ತರು ದೇವಿಯ ಪ್ರೀತ್ಯರ್ಥಕ್ಕಾಗಿ ಅವಳಿಗೆ ಉಡಿ ತುಂಬಲು ರಸ್ತೆಯ ಎರಡು ಬದಿಗೆ ಸೀರೆ, ಹೂವು, ಹಣ್ಣು, ಕಾಯಿಗಳೊಂದಿಗೆ ಕಾಯುವುದನ್ನು ಕಾಣಬಹುದು. ಅವರೆಲ್ಲರ ಪ್ರೀತಿಯನ್ನು ಸ್ವೀಕರಿಸುವ ತಾಯಿ, ನಂತರ ಗೊಂದಳಿ ಗಲ್ಲಿಯಲ್ಲಿ ಬಾಣಕಾರಿ ಕುಟುಂಬದವರ ಆತಿಥ್ಯ ಸ್ವೀಕರಿಸುವಳು. ಭಕ್ತರ ಉಧೋ ಉಧೋ ಎಂಬ ಹರ್ಷೋದ್ಘಾರಗಳ ಮಧ್ಯೆ, ದೇವಿಯ ಮುಖ್ಯ ಅರ್ಚಕರಾದ ಮಾಲದಿನ್ನಿ ಕುಟುಂಬದವರ ಬಾಗಿನ ಸ್ವೀಕರಿಸುವಳು. ಅಲ್ಲಿಯೂ ಸಹ ಸಾಂಪ್ರದಾಯಿಕವಾಗಿ ಸೀರೆ, ಕುಪ್ಪಸಗಳಾದಿಯಾಗಿ, ಹೂ ಹಾರ, ತೆಂಗಿನ ಕಾಯಿಗಳಿಂದ ಉಡಿ ತುಂಬುವರು. ಶರ್ಯತ್ತುಗಳ ರಂಗು ಜು.5 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ, ರಾತ್ರಿ ಬಯಲಾಟ, ಮದ್ದು ಹಾರಿಸುವುದು ಜರುಗಲಿವೆ. ಜು. 6ರಂದು ಜೋಡೆತ್ತಿನ ಭಾರೀ ಬಂಡಿ ಶರ್ಯತ್ತು ಜರುಗಲಿದೆ. ಪ್ರಥಮ ಬಹುಮಾನ 5 ಲಕ್ಷ ರೂ., ದ್ವಿತೀಯ 3 ಲಕ್ಷ, ತೃತೀಯ 2 ಲಕ್ಷ ರೂ. ನಿಗದಿಪಡಿಸಲಾಗಿದೆ. ಜು.7ರಂದು ಸೈಕಲ್ ಶರ್ಯತ್ತು ನಡೆಯಲಿದ್ದು, ಪ್ರಥಮ 1 ಲಕ್ಷ ರೂ., ದ್ವಿತೀಯ 75 ಸಾವಿರ, ತೃತೀಯ 50 ಸಾವಿರ ರೂ. ಬಹುಮಾನ ವಿತರಣೆ ನಡೆಯಲಿದೆ. ಜೋಡು ಕುದುರೆ ಗಾಡಿ ಶರ್ಯತ್ತು ಪ್ರಥಮ 2 ಲಕ್ಷ, ದ್ವಿತೀಯ 1 ಲಕ್ಷ, ತೃತೀಯ 50 ಸಾವಿರ ರೂ. ಬಹುಮಾನ ನೀಡಲಾಗುವುದು. ಜು.8ರಂದು ದೇವಿಯರಿಗೆ ಅಭಿಷೇಕ ಹಾಗೂ ಪೂಜೆ ಸಲ್ಲಿಸುವುದು, ಮಧ್ಯಾಹ್ನ ಪುರಜನರಿಂದ ನೈವೇದ್ಯ ಸಲ್ಲಿಸಲಾಗುವುದು.

ಜಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿರುವ ಗ್ರಾಮ ದೇವತೆಯರ ಎರಡೂ ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗಿದ್ದು, ನೂತನ ರಥಗಳನ್ನೂ ನಿರ್ಮಿಸಲಾಗಿದೆ. ಜಾತ್ರೆಯಲ್ಲಿಸಾರ್ವಜನಿಕರು ಚಿಕ್ಕ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಪೊಲೀಸ್ ಸೇರಿದಂತೆ ಎಲ್ಲಇಲಾಖೆಯ ಅಧಿಕಾರಿಗಳೊಂದಿಗೆ ಜನರು ಸಹಕರಿಸುವ ಮೂಲಕ ಜಾತ್ರೆ ಯಶಸ್ವಿಗೊಳಿಸಬೇಕು. ನಂತರ ಅಲ್ಲಿಂದ ಸೋಮವಾರಪೇಟೆಗೆ ತೆರಳಿ ಹಿಡಕಲ್ ಅವರ ಮನೆಯ ಮುಂದೆ ಬಂದು ಕೂಡುವರು. ನೆನೆದವರ ಮನದಲ್ಲಿ ಎನ್ನುವಂತೆ ನಂಬಿದ ಭಕ್ತರನ್ನು ಕೈಬಿಡದೆ ಸಲಹುವ ತಾಯಿ ಅವರ ಇಷ್ಟಾರ್ಥಗಳನ್ನು ಪೂರೈಸುವ ಜಾಗೃತ ದೇವತೆಯಾಗಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *

error: Content is protected !!