ನನ್ನ ಮಗಳಿಗೆ ಮೋಸ ಮಾಡಿದ್ದಾನೆ..’ ಯೂಟ್ಯೂಬರ್‌ ಮುಕಳೆಪ್ಪ ವಿರುದ್ಧ ತಿರುಗಿಬಿದ್ದ ಗಾಯತ್ರಿ ತಾಯಿ!

2 Min Read
Oplus_16908288

 

ಸಾರಾಂಶ

Youtuber Mukaleppa Accused of Love Jihad by Girl’s Mother ಉತ್ತರ ಕರ್ನಾಟಕದ ಯುಟ್ಯೂಬರ್ ಮುಕುಳೆಪ್ಪ ಅಲಿಯಾಸ್ ಕ್ವಾಜಾ ಶಿರಹಟ್ಟಿ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಹಿಂದೂ ಯುವತಿ ಗಾಯತ್ರಿಯನ್ನು ಮೋಸದಿಂದ ಮದುವೆಯಾಗಿದ್ದಾನೆ ಎಂದು ಬಜರಂಗದಳ ದೂರು ನೀಡಿದೆ.

ಧಾರವಾಡ (ಸೆ.20):

ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ, ಉತ್ತರ ಕರ್ನಾಟಕದ ಜನಪ್ರಿಯ ಯುಟ್ಯೂಬರ್‌ ಕ್ವಾಜಾ ಶಿರಹಟ್ಟಿ ಅಲಿಯಾಸ್‌ ಮುಕುಳೆಪ್ಪ (YouTuber Mukaleppa) ವಿರುದ್ಧ, ಬಜರಂಗದಳ ಕಾರ್ಯಕರ್ತರು ಲವ್ ಜಿಹಾದ್ ಆರೋಪದಡಿ ದೂರು ಸಲ್ಲಿಸಿದ್ದಾರೆ. ಆರೋಪದಲ್ಲಿ, ಮುಕುಳೆಪ್ಪ ಧಮ್ಕಿಗಳ ಮೂಲಕ ಮತ್ತು ಸುಳ್ಳು ದಾಖಲೆಗಳನ್ನು ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಲ್ಲದೆ, ತನ್ನ ವಿಡಿಯೋದಲ್ಲಿ ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಇದರ ನಡುವೆ ಮುಕುಳೆಪ್ಪ ಮದುವೆಯಾಗಿರುವ ಹುಡುಗಿ ಗಾಯತ್ರಿ ಅವರ ತಾಯಿ ಶಿವಕ್ಕ ಜಾಲಿಹಾಳ ವಿಡಿಯೋ ಬಿಡುಗಡೆ ಮಾಡಿದ್ದು, ಕ್ವಾಜಾ ಅಲಿಯಾಸ್‌ ಮುಕಳೆಪ್ಪ ತನ್ನ ಮಗಳಿಗೆ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. ‘ಮುಕಳೆಪ್ಪ ನನ್ನ ಮಗಳನ್ನು ಟೂರ್ ಗೆ ಕರೆದುಕ್ಕೊಂಡು ಹೋಗುತ್ತಿದ್ದ. ನಾವು ಹಳ್ಳಿಯವರು ಎಲ್ಲೂ ಹೋಗಲ್ಲ. ನನ್ನ ಮಗಳು ದೊಡ್ಡ ಹೆಸರು ಮಾಡಬಹುದು ಅಂತಾ ಮುಕಳೆಪ್ಪನ ಜೊತೆ ವಿಡಿಯೋ ಮಾಡಲು ಹೋಗುತ್ತಿದ್ದಳು. ನಾವು ವಿಡಿಯೋ ಮಾಡಲು ಕಳುಹಿಸಿಕೊಡುತ್ತಿದ್ದೆವು. ಅವನು ಈಗ ನನ್ನ ಮಗಳು ಗಾಯತ್ರಿಗೆ ಮೋಸ ಮಾಡಿದ್ದಾನೆ. ನಮ್ಮ ಹಿಂದೂ ಮಂದಿ ಏನ್ ಶಿಕ್ಷೆ ಕೊಡುತ್ತೀರೋ ಕೊಡಿ. ನನ್ನ ಮಗಳನ್ನ ಕರೆತಂದು ನನಗೆ ಒಪ್ಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕಣ್ಣೀರಿಟ್ಟ ಗಾಯತ್ರಿ ತಂದೆ-ತಾಯಿ

ತಮ್ಮ ಮಗಳನ್ನು ಪುಸಲಾಯಿಸಿ ಮುಕುಳೆಪ್ಪ ಮದುವೆ ಆಗಿದ್ದಾನೆ. ನಮ್ಮ ಮಗಳು ದೊಡ್ಡ ಮಟ್ಟದಲ್ಲಿ ಬೆಳಿತಾಳೆ ಅಂತ ನಾವು ಮುಕುಳೆಪ್ಪ ಜೊತೆಗೆ ವಿಡಿಯೋ ಮಾಡಲು ಅನುಮತಿ ನೀಡಿದ್ದೆವು. ಅದೇ ನಾವು ಮಾಡಿದ ದೊಡ್ಡ ತಪ್ಪು, ಹಿಂದೂ ಸಮಾಜ ನಮ್ಮ ಬೇಕಾಗದ್ದು ಶಿಕ್ಷೆ ನೀಡಲಿ. ಚಿತ್ರೀಕರಣ ಇದೆ ಅಂದಿದ್ದಕ್ಕೆ ಮೂರ್ನಾಲ್ಕು ದಿನ ಟೂರ್ ಗೆ ಕರೆದುಕೊಂಡು ಹೋಗುತ್ತಿದ್ದ. ಆದರೆ ಮುಕುಳೆಪ್ಪ ನಮ್ಮ ಮಗಳ ತಲೆ ಕೆಡಿಸುತ್ತಿದ್ದಾನೆ ಅಂತ ಗೊತ್ತಾಗಿಲ್ಲ. ನಮ್ಮಿಂದ ತಪ್ಪಾಯಿತು ಅಂತ ವಿಡಿಯೋದಲ್ಲಿ ಗಾಯತ್ರಿ ಅವರ ತಂದೆ ತಾಯಿ ಅಳಲು ತೋಡಿಕೊಂಡಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *

error: Content is protected !!