ಗೋಕಾಕ/ಯರಗಟ್ಟಿ: ಕಡು ಬಡತನ, ಅನರಕ್ಷರಸ್ಥ ತಂದೆ-ತಾಯಿ ಮಾರ್ಗದರ್ಶನದಲ್ಲಿ ಬೆಳೆದು, ಸರಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದ ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಹಣಮಂತಪ್ಪ ನಂದಿ (31) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 910ನೇ ೯೧೦ ನೇ ರ‍್ಯಾಂಕ್ (೩ನೇ ಪ್ರಯತ್ನ) ಪಡೆದು ಸಾಧನೆ ಮಾಡಿದ್ದಾರೆ.
ಹಣಮಂತಪ್ಪ ಅವರ ತಂದೆ ಯಲ್ಲಪ್ಪ ಅವರು ಕುರಿ ಕಾಯುವ ಕೆಲಸ ಮಾಡುತ್ತಿದ್ದು, ತಾಯಿ ಕಾಳವ್ವ ಗೃಹಣಿ.
“ಶಾಲೆಯಲ್ಲಿ ಅಣ್ಣ ಜಾಣನಿದ್ದಾನೆ. ಆತನೇ ಕಲಿಯಲಿ, ನಾನು ಕುರಿ ಕಾಯುವೆ” ಎಂದು ತರಗತಿಯಲ್ಲಿಯ ತೊರೆದು, ಅಣ್ಣನ ಸಾಧನೆಗೆ ಬೆನ್ನಾಗಿ ನಿಂತವರು ಕಿರಿಯ ಸಹೋದರ ಆನಂದ ನಂದಿ.
ಕಿತ್ತು ತಿನ್ನುವ ಬಡತನದ ಮಧ್ಯೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ 3ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ ಹಣಮಂತಪ್ಪ, ಬಿಇ ಪದವಿ ಪಡೆದಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಶಿಷ್ಯವೇತನದಡಿ ದಿಲ್ಲಿಯಲ್ಲಿ 1 ವರ್ಷ ತರಬೇತಿ ಪಡೆದಿದ್ದರು.