ಕಳೆದ 13 ತಿಂಗಳುಗಳಿಂದ ಚಿನ್ನದ ದರ ಹೆಚ್ಚುತ್ತಲೇ ಇದೆ. ಬಂಗಾರ ದಿನದಿಂದ ದಿನಕ್ಕೆ ಶಾಕ್ ನೀಡುತ್ತಲೇ ಇದೆ. ಆದರೆ ಈ ಚಿನ್ನದ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಏನು ಲಾಭ ಇದೆ? ಎಂಬ ಪ್ರಶ್ನೆ ಎಲ್ಲರಿಗೂ ಇತ್ತು. ಆದರೆ ಇನ್ನು ಮುಂದೆ ಇದು ಬದಲಾವಣೆ ಆಗಲಿದೆ. ಇದಕ್ಕೆಲ್ಲ ಕೇಂದ್ರ ಸರ್ಕಾರ ಮಾಡಿರುವ ಜಿಎಸ್ಟಿ ಬದಲಾವಣೆ. ಬಂಗಾರಕ್ಕೆ ಎಲ್ಲಿ ಹೂಡಿಕೆ ಮಾಡಬೇಕು. ಯಾವೆಲ್ಲ ಲೆಕ್ಕಚಾರಗಳು ಇರಬೇಕು ಎಂಬುದನ್ನು ಇಲ್ಲಿ ಹೇಳಲಾಗಿದೆ ನೋಡಿ
ಇವತ್ತಿನ (ಸೆಪ್ಟೆಂಬರ್ 5) ಚಿನ್ನದ ದರ (Gold price )22 ಕ್ಯಾರೆಟ್ ನದ್ದಾದರೆ ಪ್ರತಿ ಗ್ರಾಮ್ ಗೆ 9,865 ರೂಪಾಯಿ ಹಾಗೂ 24 ಕ್ಯಾರೆಟ್ ನದ್ದಾದರೆ ಪ್ರತಿ ಗ್ರಾಮ್ ಗೆ 10,762 ರೂಪಾಯಿ ಇದೆ. ಈಗಿನ ಟ್ರೆಂಡ್ ಗಮನಿಸಿದರೆ ಈ ಮೇಲ್ಮುಖದ ಪ್ರಯಾಣ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಆದರೆ 2024ರ ಜುಲೈ ತಿಂಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಮ್ ಗೆ 7,228 ರೂಪಾಯಿಯಷ್ಟಿತ್ತು. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಮ್ ಗೆ 6,625 ರೂಪಾಯಿಯಷ್ಟಿತ್ತು. ಹದಿಮೂರು ತಿಂಗಳ ಅಂತರದಲ್ಲಿ ಚಿನ್ನದ ಬೆಲೆ ಹೆಚ್ಚೂ ಕಡಿಮೆ ಶೇಕಡಾ 50ರಷ್ಟು ಹೆಚ್ಚಾಗಿದೆ. ಇದಕ್ಕೆ ಜೋಡಿ ಅನ್ನೋ ಹಾಗೆ ಬೆಳ್ಳಿಯ ಬೆಲೆಯೂ ಕೇಜಿಗೆ ಒಂದೂಕಾಲು ಲಕ್ಷ ರೂಪಾಯಿ ದಾಟಿದೆ. ಬಹಳ ಜನ ಈ ಮೇಲ್ಕಂಡ ಲೆಕ್ಕವನ್ನು ನೋಡಿ, ಅಯ್ಯೋ ವರ್ಷದ ಹಿಂದೆ ಚಿನ್ನದ ಒಡವೆ ತಗೊಂಡುಬಿಟ್ಟಿದ್ದರೆ ಅಂತ ಅಂದುಕೊಳ್ಳಬಹುದು. ಆದರೆ ನೆನಪಿಟ್ಟುಕೊಳ್ಳಬೇಕಾದ್ದು ಏನೆಂದರೆ, ಚಿನ್ನದ ಒಡವೆಯನ್ನು ಹೂಡಿಕೆ ಅಂತ ಮಾಡುವವರು ಅಷ್ಟೇನೂ ಲಾಭದಲ್ಲಿ ಇರಲ್ಲ. ಇವತ್ತಿನ ಲೆಕ್ಕಾಚಾರದಲ್ಲಿ ನೂರು ಗ್ರಾಮ್ ಜ್ಯುವೆಲ್ಲರಿ ಮಾಡಿಸದರೆ, ಸರಾಸರಿ ಎಷ್ಟು ಹಣ ಬೇಕಾದಬಹುದು ಎಂಬ ಲೆಕ್ಕ ಹೀಗಿದೆ:
ಚಿನ್ನದ ಬೆಲೆ- 9865X100= 9,85,600
ಶೇಕಡಾ 8ರಿಂದ 10ರಷ್ಟು ವೇಸ್ಟೇಜ್ ಅಂತ ಹಾಕಲಾಗುತ್ತೆ. 9865X8= 78,920
(ಅದರಲ್ಲಿ ಕಡಿಮೆಯ ಶೇ ಎಂಟರ ವೇಸ್ಟೇಜ್ ಅಂದುಕೊಂಡರೆ ಎಂಟು ಗ್ರಾಮ್ ವೇಸ್ಟೇಜ್)