ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಆರೋಪಿಗೆ ಗುಂಡಿಟ್ಟ ಪಿಎಸ್‌ಐ
ಹುಬ್ಬಳ್ಳಿ: ಬಾಲಕಿಯ ಹಂತಕನನ್ನು ಎನ್‌ಕೌಂಟರ್ ಮಾಡಿರುವ ಮಹಿಳಾ ಪಿಎಸ್‌ಐ ಅನ್ನಪೂರ್ಣಾ ಅವರನ್ನಿಗ ಹುಬ್ಬಳ್ಳಿ-ದಾರವಾಡ ಜನರು ಲೇಡಿ ಸಿಂಗಂ ಅಂತ ಹೊಗಳಾ ಡುತ್ತಿದ್ದಾರೆ. ನಗರದಲ್ಲಿ ರವಿವಾರ ಬಾಲಕಯೊಬ್ಬ ಳನ್ನು ಬಿಹಾರ ಮೂಲದ ವ್ಯಕ್ತಿ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಘಟನೆ ನಡೆದಿರುತ್ತದೆ. ಸಾರ್ವಜನಕರು ಜಾತಿ, ಮತ, ಪಂಥಗಳನ್ನು ಬಿಟ್ಟು ಬಾಲಕಿಯ ಸಾವಿಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಬೀದಿಗಿಳಿದು ಪ್ರತಿಭಟನೆ ಶುರು ಮಾಡಿದ್ದರು.
ಸಾರ್ವಜನಿಕರ ಪ್ರತಿಭಟನೆಯಿಂದ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ಆರಂಬಿಸಿದರು.
ಪೊಲೀಸ್ ಕಮಿಷನರ್ ಶಶಿಕುಮಾರ ಅವರು, ಐದು ತಂಡಗಳನ್ನು ಮಾಡಿ ಎಲ್ಲರಿಗೂ ಏನೇ ಆಗಲಿ ಇನ್ನೆರಡು ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸ ಬೇಕೆಂದು ತಂಡಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ಅದರಲ್ಲಿಯ ಒಂದು ತಂಡದಲ್ಲಿ ಅನ್ನಪೂರ್ಣಾ ಇದ್ದರು.
ಪಿಎಸ್‌ಐ ಅನ್ನಪೂರ್ಣಾ, ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕನವರು, ಹುಬ್ಬಳ್ಳಿ ಶಹರ ಠಾಣೆಯ, ಸಿಇಎನ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡವರು. ಇದೀಗ ಅಶೋಕನವರ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಪಹರಣ ಆರೋಪಿ ತಾರಿಗಾಳ ಬ್ರಿಡ್ಜ್ ಬಳಿ ಮನೆ ಯೊಂದರಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಸೂಕ್ತ ಮಾಹಿತಿ ದೊರೆತಿದೆ.
ಆತ್ಮರಕ್ಷಣೆಗೆ ಗುಂಡು:
ಆರೋಪಿ ಮೇಲೆ ಬೇಕು ಅಂತಲೇ ಗುಂಡು ಹಾರಿಸಲಿಲ್ಲ, ಆತ್ಮರಕ್ಷಣೆಗೆ ಗುಂಡು ಹಾರಿಸಿದ ಗುಂಡಿನಿಂದ ಆತ ಸತ್ತಿದ್ದಾನೆ. ಹೀಗಾಗಿ ಇದು ಎನ್‌ಕೌಂಟರ್ ಆದಂತಾಗಿದೆ. ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸಲು ಆತನ ಮನೆ ಬಳಿ ತೆರಳಿದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಪಿಎಸ್‌ಐ ಅನ್ನಪೂರ್ಣಾ ಸೇರಿದಂತೆ ಮೂವರು ಪೊಲೀಸ ಸಿಬ್ಬಂದಿಗಳು ಗಾಯ ಗೊಂಡಿದ್ದಾರೆ.
ಎಚ್ಚರಿಕೆ ಸಂದೇಶ ನೀಡುವ ಉದ್ದೇಶದಿಂದ ಮಹಿಳಾ ಪೊಲೀಸ ಪಿಎಸ್‌ಐ ಅನ್ನಪೂರ್ಣಾ ಮೊದಲು ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಆರೋಪಿ ದಾಳಿ ಮುಂದುವರಿಸಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಆತನ ಕಾಲಿಗೆ ಮೊದಲಿಗೆ ಗುಂಡು ಹಾರಿಸಲಾಗಿದೆ. ತದನಂತರವೂ ಆರೋಪಿ ತನ್ನ ಪ್ರಯತ್ನ ಮುಂದುವರಿಸಿದ್ದಾನೆ. ಆಗ ಹಾರಿಸಿದ ಗುಂಡು ಆತನ ಬೆನ್ನಿಗೆ ಬಿದ್ದಿದೆ. ಆತನಿಗೆ ಗುಂಡು ಹಾರಿಸದಿದ್ದರೆ ಪೊಲೀಸರ ಮೇಲೆ ಇನ್ನಷ್ಟು ದಾಳಿ ಮಾಡುತ್ತಿದ್ದ ಹೀಗಾಗಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸ ಅಧಿಕಾರಿಗಳು ಹೇಳುತ್ತಾರೆ.
ಆತ್ಮರಕ್ಷಣೆಗಾದರೂ ಹಾರಿಸಿರಲಿ ಅಥವಾ ಬೇಕಂತ ಹಾರಿಸಿರಲಿ, ಮಹಿಳಾ ಪಿಎಸ್‌ಐ ಕೈಗೊಂಡ ಕ್ರಮಕ್ಕೆ ಮಾತ್ರ ನಗರದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನ್ನಪೂರ್ಣಾ ಹುಬ್ಬಳ್ಳಿಯ ಲೇಡಿ ಸಿಂಗಂ ಆಗಿದ್ದಾರೆ ಎಂಬ ಮಾತು ಇದೀಗ ಎಲ್ಲರ ಬಾಯಲ್ಲೂ ಕೇಳಿಬರುತ್ತಿದೆ. ಆರೋಪಿ ಹಲ್ಲೆಯಿಂದ ಗಾಯಗೊಂಡಿದ್ದ ಲೇಡಿಸಿಂಗಂ ಅನ್ನಪೂರ್ಣಾ ಸೇರಿದಂತೆ ಇನ್ನಿಬ್ಬರು ಸಿಬ್ಬಂದಿ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯಿತ್ತಿದ್ದಾರೆ.