ಸ್ವಚ್ಚತೆ ಇಲ್ಲದೆ ನಾರುತ್ತಿರುವ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ
ಯರಗಟ್ಟಿ: ಪಟ್ಟಣದ ಬಸ್ ನಿಲ್ಯಾಣವು ಮೂಲ ಭೂತ ಸೌಕರ್ಯಗಳಿಲ್ಲದೆ ಅವ್ಯವಸ್ಥೆಯ ಆಗರವಾಗಿದ್ದು, ನಿತ್ಯವೂ ನೂರಾರು ವಾಹನಗಳು ನಿಲ್ದಾಣಕ್ಕೆ ಬಂದರೂ ಅವಶ್ಯಕ ಸೌಲಭ್ಯಗಳಿಲ್ಲದ ಪ್ರಯಾಣಿಕರು ಪರದಾಡುವಂತಾಗಿದೆ.
ಸದಾ ಬೀಗ ಹಾಕಿರುವ ಗಬ್ಬುನಾರುವ ಶೌಚಾಲಯ, ಎಲ್ಲೆಂದರಲ್ಲಿ ಬಂದು ನಿಲ್ಲುವ ಖಾಸಗಿ ದ್ವಿಚಕ್ರ ವಾಹನಗಳಿಂದಾಗಿ ರೋಸಿ ಹೋಗಿರುವ ನಿಲ್ದಾಣಾಧಿಕಾರಿ ಮತ್ತು ಮೇಲಾಧಿಕಾರಿಗಳಿಗೆ ಕಣ್ಣು ಮುಚ್ಚಿ ಕುಳಿತಿದ್ದು, ಸಮಸ್ಯೆಯ ಗಂಭೀರತೆ ತಿಳಿಸಿದಾಗ್ಯೂ ಯಾವುದೇ ಕ್ರಮ ಕೈಗೊಂಡಿಲ್ಲ.
ಬಸ್ ನಿಲ್ದಾಣವು ಕಸದ ರಾಶಿಯಿಂದ ತುಂಬಿದ್ದು, ಮಳೆ ಬಂದಾಗ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಬಸ್ ಗಾಗಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಸಾರ್ವಜನಿಕ ಶೌಚಾಲಯವು ಗಬ್ಬು ನಾರುತ್ತಿದ್ದು, ಮಹಿಳೆಯರು ಮತ್ತು ಮಕ್ಕಳು ನಿತ್ಯಕರ್ಮಕ್ಕೆ ಪರಡಾಡುವಂತಾಗಿದೆ.
ಬಸ್ ನಿಲ್ದಾಣದಲ್ಲಿ ಕುಡುಕರದ್ದೇ ದರ್ಬಾರ!
ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯದಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಹಾಗೂ ಅವಶ್ಯಕ ನಿರ್ವಹಣೆ ಇಲ್ಲದ ಕಾರಣ ರಾತ್ರಿಯಾಗುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿ ಕುಡುಕರದ್ದೇ ದರ್ಬಾರು ಎಂಬAತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.